Nt

Dhh

Monday 20 November 2017

3259 ಪೋಸ್ಟಲ್ ಅಸಿಸ್ಟೆಂಟ್/ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆಗಳು

3259 ಪೋಸ್ಟಲ್ ಅಸಿಸ್ಟೆಂಟ್/ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆಗಳು

ಅಂಚೆ ಇಲಾಖೆಯಲ್ಲಿ ಖಾಲಿಯಿರುವ 2359 ಪೋಸ್ಟಲ್ ಅಸಿಸ್ಟೆಂಟ್/ ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆಗಳೂ ಸೇರಿದಂತೆ ಒಟ್ಟು 3259 ಹುದ್ದೆಗಳಿಗೆ ಸಿಬ್ಬಂದಿ ನೇಮಕಾತಿ ಆಯೋಗವು ಅಧಿಸೂಚನೆ ಹೊರಡಿಸಿದೆ.

ಹುದ್ದೆಯ ವಿವರಗಳು:

ಲೋವರ್ ಡಿವಿಷನ್ ಕ್ಲರ್ಕ್& ಜೂನಿಯರ್ ಸೆಕ್ರೆಟೇರಿಯಟ್ ಅಸಿಸ್ಟೆಂಟ್ – 898 ಹುದ್ದೆಗಳು

ಪೋಸ್ಟಲ್ ಅಸಿಸ್ಟೆಂಟ್/ಸಾರ್ಟಿಂಗ್ ಅಸಿಸ್ಟೆಂಟ್ – 2359 ಹುದ್ದೆಗಳು

ಡೇಟಾ ಎಂಟ್ರಿ ಆಪರೇಟರ್ – 2 ಹುದ್ದೆಗಳು



ವೇತನ: ಯಾವುದೇ ಹಳ್ಳಿಯಲ್ಲಾದರೂ ಈಗಿರುವ ಏಳನೇ ವೇತನ ಆಯೋಗದ ಪ್ರಕಾರ ಆರಂಭಿಕ ಹಂತದಲ್ಲಿ ಕನಿಷ್ಠ 30,000/- ಲಭ್ಯವಾಗಲಿದೆ. ಉಳಿದಂತೆ ನಗರ ಪ್ರದೇಶ ಹಾಗೂ ಬೆಂಗಳೂರಿನಂತಹ ಮಹಾನಗರಗಳಲ್ಲಿ ವೇತನದಲ್ಲಿ ಇನ್ನಷ್ಟು ಏರಿಕೆ ಇರಲಿದೆ.


ವಯೋಮಿತಿ: 2018ರ ಆಗಸ್ಟ್ 1ಕ್ಕೆ 18 ರಿಂದ 27 (02/08/1991 ಹಾಗೂ01/08/2000 ಈ ದಿನಾಂಕದೊಳಗೆ) ವಯಸ್ಸಿನೊಳಗಿರಬೇಕು.

*ಪ.ಜಾತಿ/ಪ.ಪಂಗಡಕ್ಕೆ 5 ವರ್ಷ, ಒಬಿಸಿಗೆ 3 ವರ್ಷ, ವಿಕಲಚೇತನರಿಗೆ 10 ವರ್ಷ, ಒಬಿಸಿ ವಿಕಲಚೇತನರಿಗೆ 13 ವರ್ಷ, ಪ.ಜಾತಿ/ಪ.ಪಂಗಡ ವಿಕಲಚೇತನರಿಗೆ 15 ವರ್ಷ, ವಿಧವೆ/ವಿಚ್ಛೇದಿತೆಯರಿಗೆ 8 ವರ್ಷ, ಪ.ಜಾತಿ/ಪ.ಪಂಗಡದ ವಿಧವೆ/ವಿಚ್ಛೇದಿತೆಯರಿಗೆ 13ವರ್ಷಗಳ ಹಾಗೂ ಮಾಜಿ ಸೈನಿಕರಿಗೆ/ಸಶಸ್ತ್ರ ದಳದ ಯೋಧರಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇದೆ.


ವಿದ್ಯಾರ್ಹತೆ:

1.      ಅಂಗೀಕೃತ ಪ್ರಾಧಿಕಾರದಿಂದ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

2.     ಡೇಟಾ ಎಂಟ್ರಿ ಆಪರೇಟರ್ ಗೆ ಪಿಯುಸಿಯಲ್ಲಿ ವಿಜ್ಞಾನ ಓದಿದ್ದು, ಗಣಿತ ವಿಷಯವನ್ನು ಹೊಂದಿರಬೇಕು.


ಪರೀಕ್ಷಾ ಶುಲ್ಕ:

ರೂ.100/-(ನೂರು ರೂಪಾಯಿಗಳು ಮಾತ್ರ).

*ಮಹಿಳಾ ಅಭ್ಯರ್ಥಿಗಳು, ಪ.ಜಾತಿ/ಪ.ಪಂಗಡ, ವಿಕಲಚೇತನರು, ಮಾಜಿ ಸೈನಿಕರಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ಇದೆ.


ಪರೀಕ್ಷಾ ಕೇಂದ್ರಗಳು:

ಕರ್ನಾಟಕ-ಕೇರಳ ವಿಭಾಗ(KKR REGION)ದಲ್ಲಿ ದಲ್ಲಿ ಬೆಂಗಳೂರು, ಮಂಗಳೂರು, ಮೈಸೂರು, ಧಾರವಾಡ, ಗುಲ್ಬರ್ಗ, ತಿರುವನಂತಪುರಂ, ಕೊಚ್ಚಿ, ತ್ರಿಶ್ಶೂರ್ ಹಾಗೂ ಕೋಝಿಕೋಡಿನಲ್ಲಿ ಪರೀಕ್ಷಾ ಕೇಂದ್ರಗಳಿವೆ. ಅರ್ಜಿ ಸಲ್ಲಿಸುವ ಸಮಯದಲ್ಲಿ ಆಯಾಯ ಪರೀಕ್ಷಾ ಕೇಂದ್ರಗಳಿಗೆ ನೀಡಿರುವ ಸೂಕ್ತ ಕೋಡ್ ಗಳನ್ನು ದಾಖಲಿಸಬೇಕು. ಮೂರು ಕೇಂದ್ರಗಳನ್ನು ಆಯ್ಕೆ ಮಾಡಬಹುದಾಗಿದ್ದು. ಪರೀಕ್ಷಾ ಪ್ರಾಧಿಕಾರವೂ ಆ ವಿಭಾಗದ ಯಾವುದೇ ಕೇಂದ್ರವನ್ನು ತಮಗೆ ನೀಡುವ ಅಧಿಕಾರವನ್ನು ಹೊಂದಿದೆ.


ಪರೀಕ್ಷಾ ವೇಳಾಪಟ್ಟಿ ಹಾಗೂ ವಿಧಾನ:


ಮೊದಲನೆಯ ಹಂತ: ಮೊದಲನೆಯ ಹಂತದ ಪರೀಕ್ಷೆಯು 2018ರ ಮಾರ್ಚ್ 04 ರಿಂದ ಮಾರ್ಚ್ 26ರ ವರೆಗೆ ನಡೆಯಲಿದ್ದು, ಯಾವುದೇ ಒಂದು ದಿನದಲ್ಲಿ ಪರೀಕ್ಷೆ ಇರುತ್ತದೆ. ಪರೀಕ್ಷೆಯುವ ಒಂದು ಗಂಟೆಯ ಅವಧಿಯದ್ದಾಗಿದ್ದು, 100 ಬಹು ಆಯ್ಕೆಯ ಪ್ರಶ್ನೆಗಳು ಇರಲಿವೆ. ಪ್ರತಿ ಪ್ರಶ್ನೆಗೆ 2 ಅಂಕಗಳಿದ್ದು, ತಪ್ಪು ಉತ್ತರಕ್ಕೆ ಅರ್ಧ ಅಂಕ ಕಡಿತವಾಗಲಿದೆ. 50 ಅಂಕಗಳ ನಾಲ್ಕ ವಿಭಾಗಗಳಿದ್ದು ಮುಂದಿನ ಹಂತಕ್ಕೆ ಉತ್ತೀರ್ಣರಾಗಲು ಪ್ರತಿ ವಿಭಾಗದಲ್ಲೂ ಕನಿಷ್ಠ 18 ಅಂಕಗಳನ್ನು ಪಡೆಯಬೇಕಾಗಿರುತ್ತದೆ.


ಎರಡನೆಯ ಹಂತ: ಈ ಪರೀಕ್ಷೆಯು 2018ರ ಜುಲೈ 8ರಂದು ನಡೆಯಲಿದೆ. ಮೊದಲನೆಯ ಹಂತದಲ್ಲಿ ಉತ್ತೀರ್ಣರಾದವರಿಗೆ ಮಾತ್ರವೇ ಅವಕಾಶವಿರುತ್ತದೆ. ಇದು ವಿವರವಾಗಿ ಉತ್ತರವನ್ನು ಬರೆಯುವ ಹಂತವಾಗಿರುತ್ತದೆ. ಒಂದು ಗಂಟೆಯ ಅವಧಿಯ ಪರೀಕ್ಷೆ. 200-250 ಪದಗಳ ಒಂದು ಪ್ರಬಂಧ ಹಾಗೂ 150-200 ಪದಗಳ ಒಂದು ಅರ್ಜಿ ಬರೆಯಲಿರುತ್ತದೆ. ಈ ಹಂತದಲ್ಲಿ ಉತ್ತೀರ್ಣರಾಗಲು 33% ಅಂಕಗಳನ್ನು ಪಡೆಯಬೇಕಿದೆ. ಈ ಪರೀಕ್ಷೆಯನ್ನು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರವೇ ಬರೆಯಬಹುದಾಗಿದೆ.


ಮೂರನೇ ಹಂತ: ಕಂಪ್ಯೂಟರ್ ಕೌಶಲ್ಯ ಪರೀಕ್ಷೆ. ಪೋಸ್ಟಲ್ ಹಾಗೂ ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆಗೆ ಪ್ರತಿ ನಿಮಿಷಕ್ಕೆ 35 ಪದಗಳನ್ನು ಕಂಪ್ಯೂಟರಿನಲ್ಲಿ ಟೈಪಿಸಬೇಕು. ಉಳಿದ ಹುದ್ದೆಗಳಿಗೆ ಒಂದು ಗಂಟೆಯಲ್ಲಿ ಕಂಪ್ಯೂಟರ್ ಕೀಬೋರ್ಡಿನಲ್ಲಿ ಕನಿಷ್ಟ 8000 ಕೀಸ್ಟ್ರೋಕ್ ಒತ್ತಬೇಕಿದೆ. ಆದರೆ, ಡೇಟಾ ಎಂಟ್ರಿ ಹುದ್ದೆಗೆ ಒಂದು ಗಂಟೆಯಲ್ಲಿ ಕಂಪ್ಯೂಟರ್ ಕೀಬೋರ್ಡಿನಲ್ಲಿ ಕನಿಷ್ಟ 15,000 ಕೀಸ್ಟ್ರೋಕ್ ಒತ್ತಬೇಕಿದೆ. ಮೊದಲ ಹಾಗೂ ಎರಡನೆ ಹಂತದಲ್ಲಿ ಕನಿಷ್ಟ ಉತ್ತೀರ್ಣವಾಗಲು ಅಗತ್ಯವಿರುವ ಅಂಕಗಳನ್ನು (ಎರಡೂ ಹಂತಗಳಲ್ಲಿ ಒಟ್ಟು 33%)ಪಡೆದವರಿಗೆ ಮಾತ್ರವೇ ಈ ಹಂತಕ್ಕೆ ಪ್ರವೇಶವಿರುತ್ತದೆ.


ಅರ್ಜಿ ಸಲ್ಲಿಸುವ ವಿಧಾನ: ಆನ್ ಲೈನ್ ಅರ್ಜಿಗಳನ್ನು ಮಾತ್ರವೇ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ. ಮೊದಲಿಗೆREGISTRATION  ಎಂದಿರುವಲ್ಲಿ ಕ್ಲಿಕ್ ಮಾಡಿ. ಅದು ಈ ರೀತಿ ಇರುತ್ತದೆ.

ಈ ರಿಜಿಸ್ಟ್ರೇಶನ್ ನಲ್ಲಿ SSLC ಪ್ರಮಾಣಪತ್ರದಲ್ಲಿರುವಂತೆ ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಪ್ರಮಾಣಪತ್ರದ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ ದಾಖಲಿಸಬೇಕು.

ಅಲ್ಲಿ ಒಂದು ರಿಜಿಸ್ಟ್ರೇಶನ್ ಐಡಿ ಸಿಗಲಿದ್ದು, ಅದು ಹಾಗೂ ಅದರ ಪಾಸ್ ವರ್ಡ್ ಬರೆದಿಟ್ಟುಕೊಳ್ಳಿ. ಬಳಿಕ ಅರ್ಜಿ ಸಲ್ಲಿಸಬಹುದು.


ಅರ್ಜಿ ಸಲ್ಲಿಸುವ ಸಮಯದಲ್ಲಿ ತಮ್ಮ ಫೋಟೋ ಹಾಗೂ ಸಹಿಯನ್ನು ಸಿದ್ದವಾಗಿಟ್ಟುಕೊಳ್ಳಿ.  ಫೋಟೋ 4 ಕೆಬಿಯಿಂದ 20ಕೆಬಿ ಒಳಗಿರಬೇಕು. ಸಹಿ 1 ಕೆಬಿಯಿಂದ 12 ಕೆಬಿ ಒಳಗಿರಬೇಕು.

ನಿಮ್ಮ ಈಮೈಲ್ ಐಡಿ, ಆಧಾರ್‌ ಕಾರ್ಡ್ ಹಾಗೂ ಚಾಲನೆಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ತಯಾರಿಟ್ಟುಕೊಳ್ಳಬೇಕು.

ಅರ್ಜಿ ಸಲ್ಲಿಸಿದ ನಂತರ ಶುಲ್ಕ ವಿನಾಯಿತಿ ಹೊಂದಿರುವವರನ್ನು ಹೊರತುಪಡಿಸಿ, ಉಳಿದವರು ಶುಲ್ಕ ಪಾವತಿಸಿದರೆ ಮಾತ ಅರ್ಜಿ ಸಲ್ಲಿಕೆ ಸಂಪೂರ್ಣವಾಗುತ್ತದೆ. ಇದಕ್ಕಾಗಿ ಎಸ್ ಬಿ ಐಯ ಇಂಟರ್ ನೆಟ್ ಬ್ಯಾಂಕಿಗ್/ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್/ ಚಲನ್ ಉಪಯೋಗಿಸಬಹುದು.

ಅರ್ಜಿ ಸಲ್ಲಿಸಿದ ನಂತರ ಪ್ರಿಂಟ್ ಔಟ್ ತೆಗೆದಿರಿಸಿಕೊಳ್ಳಿ. ಇದನ್ನು ಯಾವ ಕೇಂದ್ರಕ್ಕೂ ಕಳಿಸಬೇಕಿಲ್ಲ. ತಮ್ಮ ಉಪಯೋಗಕ್ಕಾಗಿ ಮಾತ್ರ.

ಹಾಲ್ ಟಿಕೆಟ್ ಡೌನ್ ಲೋಡ್ ಮಾಡಿಕೊಳ್ಳಲು ಪರೀಕ್ಷೆಗೆ ಕೆಲವು ದಿನಗಳಿರಬೇಕಾದರೆ ತಮಗೆ ಈಮೈಲ್/ಮೆಸೆಜ್ ಮುಖಾಂತರ ಮಾಹಿತಿ ಬರುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18/12/2017 (ಸಂಜೆ ಗಂಟೆ 5ಕ್ಕೆ)

 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಬಣಕಾರ್ ಆನ್ ಲೈನ್,ಕೊಟ್ಟೂರು
8147686146